ಎಡ್ವರ್ಡ್ ಫಿಲಿಪ್ಸ್‌ ಆಪೆನ್ ಹೈಮ್(22 ಒಕ್ಟೋಬರ್ 1866 – 3 ಫೆಬ್ರವರಿ 1946) ಜನಪ್ರಿಯ ಕಾದಂಬರಿಕಾರ. == ಬಾಲ್ಯ ಮತ್ತು ಜೀವನ == ಇಂಗ್ಲೆಂಡಿನಲ್ಲಿ ಜನಿಸಿದ. ತಂದೆಯೊಡನೆ ಚರ್ಮವ್ಯಾಪಾರ ಮಾಡುತ್ತಿದ್ದು ಬಿಡುವಾದಾಗ ಬರೆಯುತ್ತಿದ್ದ. ಮೊದಲ ಕಾದಂಬರಿ 1887ರಲ್ಲಿ ಅಚ್ಚಾಯಿತು. ಷೆಫಿಲ್ಡ್‍ನ ವೀಕ್ಲಿ ಟೆಲಿಗ್ರಾಫ್ ಪತ್ರಿಕೆಗೆ ಆರು ಧಾರಾವಾಹಿ ಕಥೆಗಳನ್ನು ಬರೆದ. 1891ರಲ್ಲಿ ಎಲ್ಸಿ ಹಾಪ್‍ಕಿನ್ಸ್ ಎಂಬ ಅಮೆರಿಕದ ಮಹಿಳೆಯನ್ನು ಮದುವೆಯಾದ . == ಸಾಹಿತ್ಯ ರಚನೆ == ಅಂತರರಾಷ್ಟ್ರೀಯ ರಹಸ್ಯ ಪತ್ರಗಳು, ಮೋಸದ ರಾಜಕಾರಣಿಗಳು, ಸಾಹಸಿ ಸ್ತ್ರೀಯರು-ಇವರ ಗುಪ್ತಸಂಚುಗಳನ್ನೊಳಗೊಂಡ ನೂರಾರು ಕಾದಂಬರಿಗಳನ್ನು ಬರೆದ. ದಿ ಮಿಸ್ಟೀರಿಯಸ್ ಮಿಸ್ಟರ್ ಸ್ಯಾಬಿನ್ (1898), ಎ ಪ್ರಿನ್ಸ್ ಆಫ್ ಸಿನ್ನರ್ಸ್ (1903), ದಿ ಗ್ರೇಟ್ ಇಂರ್ಪನೇಷನ್ (1920), ದಿ ಕಿಂಗ್‍ಡಂ ಆಫ್ ದಿ ಬ್ಲೈಂಡ್ (1917)-ಇವು ಆತನ ಪ್ರಸಿದ್ಧ ಕಾದಂಬರಿಗಳು. ದಿ ಪೂಲ್ ಆಫ್ ಮೆಮೊರಿ (1941) ಆತನ ಆತ್ಮಕಥೆ. ಆತ್ಮವಿಷಯ ಹೆಚ್ಚಿಲ್ಲದಿದ್ದರೂ ಗ್ರಂಥ ಚೆನ್ನಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 1927 25 2012 ವೇಬ್ಯಾಕ್ ಮೆಷಿನ್ ನಲ್ಲಿ. . , ( ಅಕ್ಟೋಬರ್ ೨೬, ೨೦೦೯) ' .